ಬೆಂಗಳೂರು ಮೇಯರ್ ಚುನಾವಣೆ: ಜೆಡಿಎಸ್ ನಿರ್ಧಾರದತ್ತ ಕಾಂಗ್ರೆಸ್, ಬಿಜೆಪಿ ಚಿತ್ತ!

hd-new

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಗೆ ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ತನ್ನ ಹಳೇಯ ದೋಸ್ತಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮುಂದುವರಿಸುತ್ತದೆಯೋ ಅಥವಾ ಬೆಂಬಲ ವಾಪಸ್ ಪಡೆದುಕೊಳ್ಳುತ್ತದೆಯೋ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.ಎಲ್ಲರ ಕಣ್ಣು ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್,ಡಿ ಕುಮಾರಸ್ವಾಮಿ ಮೇಲಿದೆ. ಎಚ್ ಡಿಕೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರು ಕುತೂಹಲದಿಂದ ಕಾಯುತ್ತಿದ್ದಾರೆ.ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಆಧ್ಯಕ್ಷರ ಆಯ್ಕೆ ಸೆಪ್ಟಂಬರ್ 28 ರಂದು ನಡೆಯಲಿದೆ, ಈ ಬಾರಿ ಮೇಯರ್ ಹುದ್ದೆ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದ್ದು, ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು, ಮೇಯರ್ ಹುದ್ದೆ ಪಡೆಯಲು ಹವಣಿಸುತ್ತಿವೆ. ಆದರೆ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಪಕ್ಷ ಇನ್ನೂ ನಿರ್ಧರಿಸಿಲ್ಲ ಎಂದು ಜೆಡಿಎಸ್ ಶಾಸಕ ಶರವಣ ತಿಳಿಸಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶರವಣ, ಮೇಯರ್ ಚುನಾವಣೆಗೆ ಇನ್ನೂ ಸಮಯ ಇರುವುದರಿಂದ ಯಾವುದೇ ಆತುರವಿಲ್ಲ, ಬಿಬಿಎಂಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು 2 ಬಾರಿ ಕಾಂಗ್ರೆಸ್ ಪಕ್ಷವೇ ಮೇಯರ್ ಆಗಿದೆ. ಹಾಗಾಗಿ ಈ ಬಾರಿ ನಮಗೆ ಮೇಯರ್ ಪಟ್ಟ ನೀಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಬೆಂಬಲ ನೀಡಿದ ನಂತರ ಕಾಂಗ್ರೆಸ್ ನಮ್ಮನ್ನು ಮೂಲೆ ಗುಂಪು ಮಾಡುತ್ತದೆ ಎಂ0ದು ಆರೋಪಿಸಿದ್ದಾರೆ.ಜೆಡಿಎಸ್ ಅನ್ನು ಪ್ರತಿನಿಧಿಸುಪ ವಾರ್ಡ್ ಗಳ ಸದಸ್ಯರಿಗೆ ಅನುದಾನ ಹಂಚಿಕೆಯಲ್ಲಿ ತಾರಮತ್ಯ ಮಾಡಲಾಗುತ್ತದೆ, ಕಾಂಗ್ರೆಸ್ ಸದಸ್ಯರಿರುವ ವಾರ್ಡ್ ಗಳಿಗೆ ಹೆಚ್ಚಿನ ಅನುದಾನ ಹಣ ನೀಡಲಾಗುತ್ತದೆ.

ಸಮನ್ವಯ ಸಮಿತಿ ರಚಿಸಲಾಗಿದ್ದು, ಇದುವರೆಗೂ ಒಂದು ಸಭೆಯನ್ನು ಕೂಡ ನಡೆಸಿಲ್ಲ, ನಾನು ಸಭೆಯ ಸದಸ್ಯನಾಗಿದ್ದೇನೆ, ಆದರೆ ಯಾರಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನಸ್ಸಿಗೆ ಬಂದಂಥೆ ನಿರ್ಧಾರ ಕೈಗೊಳ್ಳುತ್ತಾರೆ, ಹೀಗಿರುವಾಗ ಅವರಿಗೆ ನಾವು ಏಕೆ ಬೆಂಬಲ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.ಮೈತ್ರಿ ಮುಂದುವರಿಸುವ ಬಗ್ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕುಮಾರಸ್ವಾಮಿ ಮನವೋಲಿಸಲು ಯತ್ನಿಸುತ್ತಿದ್ದಾರೆ. ಗುರುವಾರ ಕುಮಾರಸ್ವಾಮಿ, ಪರಮೇಶ್ವರ್ ಮತ್ತು ಸುರೇಶ್ ಹಾಗೂ ನಾನು ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಬೇಕಿತ್ತು, ಆದರೆ ಕುಮಾರ ಸ್ವಾಮಿ, ಅನಾರೋಗ್ಯದ ಕಾರಣ ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಜೆಡಿಎಸ್ ಗೆ ಮೇಯರ್ ಸ್ಥಾನ ನೀಡುವುದರ ಜೊತೆಗೆ 4 ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಟ್ಟಿದೆ. ಆದರೆ ಕಾಂಗ್ರೆಸ್ ಮುಖಂಡರು ಇದಕ್ಕೆ ಸಮ್ಮತಿಸಿಲ್ಲ, ಈ ಸಂಬಂಧ ಕುಮಾರ ಸ್ವಾಮಿ ಅವರನ್ನು ಪ್ರಶ್ನಿಸಿದರೇ, ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ ಮತ್ತಷ್ಟು ಓದು

ಕೃಷ್ಣಾನದಿ ದ್ವೀಪದಲ್ಲಿ ಸಿಲುಕಿದ ಮೂವರು ಕುರಿಗಾಹಿಗಳು: ರಕ್ಷಣೆಗಾಗಿ ಎನ್ ಡಿ ಆರ್ ಎಫ್ ಮೊರೆ

krishna-new

ಬೆಳಗಾವಿ: ಯಾದಗಿರಿ ಜಿಲ್ಲೆಯ ಕೃಷ್ಣಾನದಿ ದ್ವೀಪದಲ್ಲಿ ಕಳೆದ 4 ದಿನಗಳಿಂದ ಸಿಲುಕಿರುವ ಮೂವರು ಕುರಿಗಾಹಿಗಳನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಮನವಿ ಮಾಡಲಾಗಿದೆ. ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಮೇಲಿನಗಡ್ಡಿ ಗ್ರಾಮದ ಮೂರು ಕುರಿಗಾಹಿಗಳು ಮತ್ತು ಅವರ 80 ಕುರಿಗಳು ದ್ವೀಪದಲ್ಲೇ ಸಿಲುಕಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಸ್ಲೂಸ್ ಗೇಟ್ ಗಳನ್ನು ತೆರೆಯಲಾಗಿದೆ.

ಹೈದರಾಬಾದ್ ನಿಂದ ಆಗಮಿಸಿದ 22 ಸದಸ್ಯರ ತಂಡ ಸುರಪುರದ ಮೆಲಿನಗಡ್ಡಿ ದ್ವೀಪದಲ್ಲಿ ಸಿಲುಕಿರುವವರ ರಕ್ಷಣೆಗೆ ಗುರುವಾರ ಬೆಳಗ್ಗೆ ರಕ್ಷಣಾ ಕಾರ್ಯ ಆರಂಭಿಸಿದೆ. ಮೇಲಿನಗಡ್ಡಿ ದ್ವೀಪ ಯಾದಗಿರಿಯಿಂದ 120 ಕಿಮೀ ದೂರದಲ್ಲಿದೆ.ಕಳೆದ ನಾಲ್ಕು ದಿನಗಳಿಂದ ದ್ವೀಪದಲ್ಲಿ ಸಿಲುಕಿರುವ ಕುರಿಗಾಹಿಗಳು ಕುರಿಯ ಹಾಲನ್ನು ಕುಡಿದು ಜೀವಿಸುತ್ತಿದ್ದಾರೆ. ಬುಧವಾರ ಕೂಡ ರಕ್ಷಣಾ ಪಡೆ ದ್ವೀಪ ತಲುಪಲು ಸಾಧ್ಯವಾಗಲಿಲ್ಲ, ಜಲಾಶಯದ ಹೊರ ಹರಿವು ಹೆಚ್ಚಿದ್ದು, ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ ಮತ್ತಷ್ಟು ಓದು

ತಮಿಳುನಾಡಿನ ಜನರಿಗಾಗಿ ನಾನು ಮುಖ್ಯಮಂತ್ರಿಯಾಗಲು ಬಯಸುತ್ತೇನೆ: ಕಮಲ್ ಹಾಸನ್

kamal-hassan

ಚೆನ್ನೈ: ನಾನು ತಮಿಳು ನಾಡು ಜನತೆಗೆ ಮುಖ್ಯಮಂತ್ರಿಯಾಗಲು ಬಯಸುತ್ತೇನೆ, ಇದು ಖ್ಯಾತ ಹಿರಿಯ ನಟ, ನಿರ್ದೇಶಕ ಕಮಲ್ ಹಾಸನ್ ಹೇಳಿರುವ ಮಾತು.ಇಂಡಿಯಾ ಟುಡೆ ಸುದ್ದಿ ಚಾನೆಲ್ ಗೆ ಸಂದರ್ಶನ ನೀಡಿದ ವೇಳೆಯಲ್ಲಿ ಅವರು, ತಾವು ರಾಜಕೀಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಮೊದಲು ಅದರ ನೀಲನಕ್ಷೆಯೊಂದನ್ನು ಸಿದ್ಧಪಡಿಸುತ್ತೇನೆ ಎಂದು ಹೇಳಿದ್ದಾರೆ.ರಾಜಕೀಯಕ್ಕೆ ಸೇರುವುದೆಂದರೆ ಮುಳ್ಳಿನ ಕಿರೀಟ ಧರಿಸಿದ ಹಾಗೆ ಎಂದು ಕಮಲ್ ಹಾಸನ್ ವ್ಯಾಖ್ಯಾನಿಸಿದ್ದಾರೆ.

ನಿನ್ನೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಕಮಲ್ ಹಾಸನ್ ಅವರನ್ನು ಅವರ ಚೆನ್ನೈನ ನಿವಾಸದಲ್ಲಿ ಭೇಟಿ ಮಾಡಿದ್ದರು. ಇವರಿಬ್ಬರ ಈ ಭೇಟಿಯಿಂದ ಕಮಲ್ ಹಾಸನ್ ಭ್ರಷ್ಟಾಚಾರ ವಿರೋಧ ವೇದಿಕೆಯನ್ನು ಮುಂದಿಟ್ಟುಕೊಂಡು ಅಲ್ಪಾವಧಿಯಲ್ಲಿಯೇ ರಾಜ್ಯವೊಂದರಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವನ್ನು ಸೇರುತ್ತಾರೆಯೇ ಅಥವಾ ತಮ್ಮದೇ ಸ್ವಂತ ಪಕ್ಷ ಕಟ್ಟುತ್ತಾರೆಯೇ ಎಂಬ ಕುತೂಹಲ ಮೂಡಿಸಿದೆ.ತಮಿಳು ನಾಡಿನಲ್ಲಿ ಈಗಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಅದನ್ನು ಭ್ರಷ್ಟ ಸರ್ಕಾರ ಎಂದು ಕರೆದಿದ್ದಾರೆ. ರಾಜ್ಯದ ಎಲ್ಲಾ ಪ್ರಸ್ತುತ ರಾಜಕಾರಣಿಗಳ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಇದೇ ಸಂದರ್ಭದಲ್ಲಿ ತಮಿಳು ನಾಡಿನ ಜನತೆಗೆ ಹೇಳಿದರು.ಜನರ ಕೆಲಸ ಮಾಡಿಕೊಡಲು ಜನರಿಂದ ಲಂಚ ಸ್ವೀಕರಿಸುವ ಸಚಿವರುಗಳನ್ನು ಜನತೆ ವಿರೋಧಿಸಬೇಕು ಎಂದು ಒತ್ತಾಯಿಸಿದರು.ತಮ್ಮ ಮುಂದಿನ ನಡೆ ಏನು ಎಂದು ಸುದ್ದಿ ಮಾಧ್ಯಮದ ಪ್ರತಿನಿಧಿ ಕೇಳಿದಾಗ, ರಾಜಕೀಯಕ್ಕೆ ಧುಮುಕುವ ಮೊದಲು ನಾನು ಸಿದ್ಧತೆ ಮಾಡಿಕೊಳ್ಳಬೇಕು.

ಜನರನ್ನು ಭೇಟಿ ಮಾಡಿ ಸದ್ಯದಲ್ಲಿಯೇ ಅವರಿಗೆ ನನ್ನ ನೀಲನಕ್ಷೆಯೊಂದನ್ನು ನೀಡುತ್ತೇನೆ ಎಂದರು.ಕ್ರಾಂತಿಕಾರಿ ಚಿಂತನೆಯ ನಟ ಕಮಲ್ ಹಾಸನ್ ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಹಾಗೂ ಕಮ್ಯೂನಿಸ್ಟ್ ಪಕ್ಷದ ನಾಯಕ ಪಿನರಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದರು. ರಾಜಕೀಯದಲ್ಲಿ ತಮ್ಮ ತತ್ವ, ನಿಲುವುಗಳೇನು ಎಂದು ಕೇಳಿದ್ದಕ್ಕೆ, ಯಾವುದನ್ನೂ ತಾವು ಗ್ರಹಿಸಿಲ್ಲ ಎಂದರು. ಜನರಿಗೆ ಯಾವುದೇ ಎಡರಂಗ, ಬಲರಂಗ ಅಥವಾ ಪಂಥೀಯವಾದದ ಬಗ್ಗೆ ಆಸಕ್ತಿಯಿರುವುದಿಲ್ಲ. ಸಾಮಾನ್ಯ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸಿದರೆ ಪಂಥೀಯವಾದಗಳಿಗೆ ಒಂದು ದಾರಿ ಸಿಗುತ್ತದೆ ಎಂದರು ಮತ್ತಷ್ಟು ಓದು

ಹ್ಯಾಟ್ರಿಕ್ ಎಸೆತಕ್ಕೂ ಮುನ್ನ ಕುಲದೀಪ್ ಯಾದವ್ ಗೆ ಧೋನಿ ಹೇಳಿದ್ದೇನು?

dhoni-kuldeep.jpg

ಕೋಲ್ಕತಾ: ಆಸ್ಟ್ರೇಲಿಯಾದತ್ತ ವಾಲುತ್ತಿದ್ದ ಪಂದ್ಯವನ್ನು ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಭಾರತದತ್ತ ತಿರುಗಿಸಿದ ಕುಲದೀಪ್ ಯಾದವ್ ಹ್ಯಾಟ್ರಿಕ್ ಎಸೆತಕ್ಕೂ ಮುನ್ನ ತೀವ್ರ ಒತ್ತಡಕ್ಕೆ ಒಳಗಾಗಿದ್ದರಂತೆ. ಆದರೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮಾತು ಅವರಿಗೆ ಸ್ಪೂರ್ತಿ ನೀಡಿತಂತೆ…

ನಿನ್ನೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಹ್ಯಾಟ್ರಿಕ್ ಎಸೆತದ ಗುಟ್ಟನ್ನ ಬಹಿರಂಗ ಪಡಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕುಲದೀಪ್ ಯಾದವ್, ಸತತ ಎರಡು ವಿಕೆಟ್ ಗಳನ್ನು ಪಡೆದ ಬಳಿಕ ನಾನು ಕೊಂಚ ಒತ್ತಡಕ್ಕೆ ಒಳಗಾಗಿದ್ದೆ. ಆಗ ನೇರವಾಗಿ ಧೋನಿ ಬಳಿ ಹೋಗಿ, ಮುಂದಿನ ಎಸೆತದ ಕುರಿತು ಚರ್ಚೆ ನಡೆಸಿದೆ.”ಧೋನಿ ಭಾಯ್ ಮುಂದಿನ ಎಸೆತ ಹೇಗೆ ಮಾಡಲಿ” ಎಂದು ಕೇಳಿದೆ… ಅದಕ್ಕೆ ಉತ್ತರಿಸಿದ ಧೋನಿ..”ತಲೆ ಕೆಡಿಸಿಕೊಳ್ಳಬೇಡ..ನಿನಗೆ ಹೇಗೆ ಬೇಕೋ ಹಾಗೆ ಮಾಡು”.. ಎಂದು ಹೇಳಿ ನನ್ನನ್ನು ಹುರಿದುಂಬಿಸಿದರು. ಅವರ ಈ ಮಾತುಗಳು ನನಗೆ ತುಂಬಾ ಸ್ಪೂರ್ತಿ ತುಂಬಿತು. ಬಳಿಕದ ಎಸೆತದಲ್ಲೇ ಪಾಟ್ ಕ್ಯುಮಿನ್ಸ್ ರನ್ನು ಔಟ್ ಮಾಡಿದೆ ಎಂದು ಕುಲದೀಪ್ ಯಾದವ್ ತಮ್ಮ ಹ್ಯಾಟ್ರಿಕ್ ವಿಕೆಟ್ ಪಡೆದ ಸಂದರ್ಭವನ್ನು ವಿವರಿಸಿದ್ದಾರೆ.ಇದೇ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆದ ಕ್ಷಣವನ್ನು ತಮ್ಮ ವೃತ್ತಿ ಜೀವನದ ವಿಶೇಷ ಕ್ಷಣಗಳು ಎಂದು ಬಣ್ಣಿಸಿರುವ ಕುಲದೀಪ್ ಯಾದವ್, ಈ ಸಂದರ್ಭ ಇಡೀ ಪಂದ್ಯವನ್ನೇ ಬದಲಿಸಲು ಸಹಕಾರಿಯಾಯಿತು. ನನ್ನ ಮೊದಲ ಐದು ಓವರ್ ಗಳಲ್ಲಿ ನಾನು ಸಾಕಷ್ಟು ಶ್ರಮ ಪಟ್ಟೆ.. ಪ್ರಮುಖವಾಗಿ ಪಿಚ್ ನ ಕೆಲ ನಿರ್ದಿಷ್ಟ ಭಾಗಗಳಲ್ಲಿ ಚೆಂಡನ್ನು ಪಿಚ್ ಮಾಡಲು ಯತ್ನಿಸುತ್ತಿದ್ದೆ. ಆದರೆ ಬಳಿ ಅದು ಸರಾಗವಾಯಿತು ಎಂದು ಕುಲದೀಪ್ ಯಾದವ್ ಹೇಳಿದ್ದಾರೆ ಮತ್ತಷ್ಟು ಓದು

ಕೊಹ್ಲಿ ಮೇಲೆ ಸ್ಲೆಡ್ಜಿಂಗ್ ತಂತ್ರ ಬಳಿಸಿದರೇ ಅಪಾಯ ಕಟ್ಟಿಟ್ಟಬುತ್ತಿ: ಆಸ್ಟ್ರೇಲಿಯಾ ತಂಡಕ್ಕೆ ಗಿಲೆಸ್ಪಿ ಎಚ್ಚರಿಕೆ

ನವದೆಹಲಿ: ಸ್ಲೆಡ್ಜಿಂಗ್ ಮೂಲಕ ಎದುರಾಳಿ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸುವಲ್ಲಿ ಅಗ್ರಜರಾಗಿರುವ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಮಾಜಿ ಆಟಗಾರರೊಬ್ಬರು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. ಇದೇ ಸೆಪ್ಟೆಂಬರ್ 17ರಂದು ಆರಂಭಗೊಳ್ಳಲಿರುವ ಟೀಂ ಇಂಡಿಯಾ ವಿರುದ್ಧದ ಸರಣಿಗಾಗಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಆಗಮಿಸಿದ್ದು, ನಾಯಕ ಸ್ಟೀವ್ ಸ್ಮಿತ್ ಪಡೆಗೆ ಮಾಜಿ ಕ್ರಿಕೆಟಿಗ ಜೇಸನ್ ಗಿಲೆಸ್ಪಿ ಟೀಂ ಇಂಡಿಯಾ ಜತೆ ಸ್ಲೆಡ್ಜಿಂಗ್ ತಂತ್ರವನ್ನು ಬಳಸಬೇಡಿ. ಅದರಲ್ಲೂ ಪ್ರಮುಖವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಟೆಗೆ ಹೋಗಬೇಡಿ ಎಂದು ಖಡರ್ ಎಚ್ಚರಿಕೆಯನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿಯನ್ನು ಮಣಿಸಲು ಬೇಕಾದರೆ ಅಗ್ರೆಸ್ಸಿವ್ ಆಗಿ ಬೌಲಿಂಗ್ ಮಾಡಿ. ಅದನ್ನು ಬಿಟ್ಟು ಸ್ಲೆಡ್ಜಿಂಗ್ ತಂತ್ರವನ್ನು ಅವರ ಮೇಲೆ ಪ್ರಯೋಗಿಸದೇ ಅವರನ್ನು ಒಂಟಿಯಾಗಿ ಬಿಡಿ. ಕೊಹ್ಲಿ ಸ್ವಲ್ಪ ಕಾಲ ಪಿಚ್ ಗೆ ಅಡ್ಜೆಸ್ಟ್ ಆದರೆ ಅವರನ್ನು ತಡೆಯಲಾಗದು ಎಂದು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿರುವ 23 ಏಕದಿನ ಪಂದ್ಯಗಳ ಪೈಕಿ 55.6 ಸರಾಸರಿಯಲ್ಲಿ 1003 ರನ್ ಸಿಡಿಸಿದ್ದಾರೆ. 2012ರಲ್ಲಿ ಆಸ್ಟ್ರೇಲಿಯಾ ಆಟಗಾರರು ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡಿದಾಗ ರೊಚ್ಚಿಗೆದ್ದ ವಿರಾಟ್ ಚೊಚ್ಚಲ ಶತಕ ಸಿಡಿಸಿದ್ದರು. ನಂತರ ಆಸೀಸ್ ವಿರುದ್ಧದ ಸರಣಿಯಲ್ಲೂ 4 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದರು ಮತ್ತಷ್ಟು ಓದು

ಭಾರತ-ಜಪಾನ್ ಆತ್ಮೀಯತೆ: ಶಿಂಜೋ ಅಬೆ ಏನು ತಿನ್ನಬೇಕು, ಎಲ್ಲಿಗೆ ಭೇಟಿ ನೀಡಬೇಕು ಎಂಬುದು ಮೋದಿ ಆಯ್ಕೆ!

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅತ್ಯಂತ ಆತ್ಮೀಯತೆಯನ್ನು ಹೊಂದಿದ್ದಾರೆ ಎಂಬುದು ಅಹಮದಾಬಾದ್ ನಲ್ಲಿ ನಡೆದ ರೋಡ್ ಶೋ, ಸಬರ್ಮತಿ ಆಶ್ರಮಕ್ಕೆ ಭೇಟಿ ಸೇರಿದಂತೆ ಶಿಂಜೋ ಅಬೆ ಅವರ ಭಾರತ ಭೇಟಿಯ ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗುತ್ತಿದೆ.
ಜಪಾನ್ ಪ್ರಧಾನಿ ಶಿಂಜೋ ಅಬೆ, ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಮೋದಿ ಜಾಕೆಟ್ ಎಂದೇ ಪ್ರಸಿದ್ಧವಾಗಿರುವ ಕುರ್ತಾ-ಪೈಜಾಮ ಧರಿಸಿ ಗಮನ ಸೆಳೆದಿದ್ದೂ ಸಹ ಅವರಿಬ್ಬರಲ್ಲಿರುವ ಆತ್ಮೀಯತೆಯನ್ನು ತೋರುತ್ತದೆ. ಅಷ್ಟೇ ಅಲ್ಲ. ಜಪಾನ್ ಪ್ರಧಾನಿ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಅತ್ಮೀಯ ಅಪ್ಪುಗೆಯಿಂದ ಬರಮಾಡಿಕೊಂಡಿದ್ದ ಮೋದಿಯೇ, ಶಿಂಜೋ ಅಬೆ ಎಲ್ಲಿ ಉಳಿದುಕೊಳ್ಳಬೇಕು, ಏನನ್ನು ತಿನ್ನಬೇಕು, ಎಲ್ಲೆಲ್ಲಿಗೆ ಭೇಟಿ ನೀಡಬೇಕೂ ಎಂಬುದನ್ನೂ ಆಯ್ಕೆ ಮಾಡಿದ್ದು, ಜಪಾನ್ ಪ್ರಧಾನಿಗಾಗಿ ಮೋದಿಯ ಆಯ್ಕೆಗಳು ಈಗ ಸದ್ಯಕ್ಕೆ ಅತ್ಯಂತ ಹೆಚ್ಚು ಗಮನ ಸೆಳೆದಿರುವ ವಿಷಯವಾಗಿದೆ.
ಜಪಾನ್ ಪ್ರಧಾನಿಯ ಭೇಟಿಯನ್ನು 2014 ರಲ್ಲಿ ಭಾರತಕ್ಕೆ ಆಗಮಿಸಿದ್ದ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರ ಭೇಟಿಗೆ ಹೋಲಿಕೆ ಮಾಡಲಾಗುತ್ತಿದ್ದು, ಆಗಲೂ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಗುಜರಾತ್ ಗೆ ತೆರಳಿದ್ದ ಕ್ಸೀ ಜಿನ್ ಪಿಂಗ್ ಮತ್ತು ಮೋದಿ ಅವರ ಆತ್ಮೀಯತೆಯ ವಿಶೇಷತೆಗಳು ಇದೇ ರೀತಿ ಸುದ್ದಿಯಾಗಿದ್ದವು ಮತ್ತಷ್ಟು ಓದು

ಭಾರತದ ಮೊಟ್ಟಮೊದಲ ಬುಲೆಟ್ ರೈಲು ಯೋಜನೆಗೆ ಇಂದು ನರೇಂದ್ರ ಮೋದಿ, ಶಿಂಜೋ ಅಬೆ ಚಾಲನೆ!

ಅಹ್ಮದಾಬಾದ್: ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಗುರುವಾರ ಅಹ್ಮದಾಬಾದ್ ನಲ್ಲಿ ಚಾಲನೆ ನೀಡಲಿದ್ದಾರೆ.
ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಈ ಯೋಜನೆ ಪೂರ್ಣಗೊಳ್ಳಲು 2022ರವರೆಗೂ ಕಾಲಮಿತಿ ವಿಧಿಸಲಾಗಿದೆ. ಎರಡು ಪ್ರಮುಖ ನಗರಗಳ ನಡುವಿನ ಸುಮಾರು  500 ಕಿ.ಮೀ ದೂರದ ಬುಲೆಟ್ ರೈಲು ಯೋಜನೆಗೆ ಇಂದು ಉಭಯ ನಾಯಕರು ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಈ ಯೋಜನೆ ಪೂರ್ಣಗೊಂಡ ಬಳಿಕ ಕೇವಲ 2 ಗಂಟೆಗಳಲ್ಲಿ  ಅಹ್ಮದಾಬಾದ್ ನಿಂದ ಮುಂಬೈ ಸಂಚರಿಸಬಹುದಾಗಿದೆ.ಈ ಬೃಹತ್ ಯೋಜನೆ ಒಟ್ಟು 108 ಲಕ್ಷ ಕೋಟಿ ಹಣ ಖರ್ಚಾಗಲಿದ್ದು, ಜಪಾನ್ ಸರ್ಕಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಸಿದ್ಧವಾಗಿದೆ. ಇಂತಹ ಸಾಲಗಳಿಗೆ  ವಿಶ್ವಬ್ಯಾಂಕ್ ವಾರ್ಷಿಕ ಶೇ.5 ರಿಂದ 7ರವರೆಗೂ  ಬಡ್ಡಿ ವಿಧಿಸುತ್ತದೆ. ಆದರೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಹಾಲಿ ಬುಲೆಟ್ ರೈಲು ಯೋಜನೆ ಭಾರತ-ಜಪಾನ್ ಸ್ನೇಹದ ದ್ಯೋತಕವಾಗಿರುವುದರಿಂದ ಶೇ.0.1ರಷ್ಟು  ಬಡ್ಡಿದರಕ್ಕೆ ಸಾಲ ನೀಡಿದ್ದಾರೆ.ವಿಶ್ವ ಬ್ಯಾಂಕ್ ಸಾಲದ ಗಡುವು 25-35 ವರ್ಷಗಳಾಗಿದೆ, ಜಪಾನ್ ಸರ್ಕಾರ ಭಾರತಕ್ಕೆ 15 ವರ್ಷಗಳ ಹೆಚ್ಚುವರಿ ಕಾಲ ಮಿತಿಯನ್ನೂ ನೀಡಿದೆ. ಅದರಂತೆ ಭಾರತ ಸರ್ಕಾರ 50 ವರ್ಷಗಳಲ್ಲಿ ಈ ಸಾಲವನ್ನು ಜಪಾನ್ ಸರ್ಕಾರಕ್ಕೆ  ವಾಪಸ್ ಮಾಡಬೇಕಿದೆ.  ಇನ್ನು ಉಭಯ ನಾಯಕರು ಈ ಬುಲೆಟ್ ರೈಲು ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಗಾಂಧಿ ನಗರದಲ್ಲಿ ನಡೆಯುವ 12ನೇ ಇಂಡೋ-ಜಪಾನ್ ವಾರ್ಷಿಕ ಸಮಿತ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತಷ್ಟು ಓದು

ದೆಹಲಿ ರೈಲು ನಿಲ್ದಾಣದಲ್ಲಿ ಹಳಿ ತಪ್ಪಿದ ಜಮ್ಮು ರಾಜಧಾನಿ ಎಕ್ಸ್ ಪ್ರೆಸ್ ಬೋಗಿ

ನವದೆಹಲಿ: ರೈಲು ಹಳಿ ತಪ್ಪುವ ದುರ್ಘಟನೆ ಮತ್ತೆ ಮುಂದುವರಿದಿದೆ. ಜಮ್ಮು ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಕೊನೆಯ ಬೋಗಿ ಇಂದು ದೆಹಲಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಹಳಿ ತಪ್ಪಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಅವಘಡ ಸಂಭವಸಿದ್ದು ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ಇದುವರೆಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ ಮತ್ತಷ್ಟು ಓದು

ಸರ್ಕಾರದ ಭರವಸೆ: ಆಶಾ ಕಾರ್ಯಕರ್ತೆಯರ ಮುಷ್ಕರ ವಾಪಸ್

ಬೆಂಗಳೂರು: ರಾಜ್ಯ ಸರ್ಕಾರ ಮಾಸಿಕ 3000 ರೂ. ಪ್ರೋತ್ಸಾಹಧನ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಎರಡು ದಿನಗಳ ಮುಷ್ಕರವನ್ನು ಶುಕ್ರವಾರ ರಾತ್ರಿ ಅಂತ್ಯಗೊಳಿಸಿದ್ದಾರೆ.
ಔಷಧ ನಿಯಂತ್ರಣಾಲಯ ಕಚೇರಿಯಲ್ಲಿ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳೊಂದಿಗೆ ಆರೋಗ್ಯ ಸಚಿವ  ಕೆ.ಆರ್. ರಮೇಶ್‌ ಕುಮಾರ್‌ ಸತತ ಎರಡು ತಾಸು ಸಂಧಾನ ಸಭೆ ನಡೆಸಿದರು. ಸರ್ಕಾರ 3000 ರೂ. ನೀಡುವುದಾಗಿ ಹೇಳಿದರೆ, ಕಾರ್ಯಕರ್ತೆಯರು 6000 ರೂ.ಗಳಿಗೆ ಪಟ್ಟುಹಿಡಿದರು. ಅಂತಿಮವಾಗಿ ಸರ್ಕಾರ  3000 ನೀಡುವುದಾಗಿ ಹೇಳಿತು. ಇದಕ್ಕೆ ಸಮ್ಮತಿಸಿದ ಕಾರ್ಯಕರ್ತೆಯರು ಮುಷ್ಕರ ಹಿಂಪಡೆಯಲು ಒಪ್ಪಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ : “ಆರೋಗ್ಯ ಸಚಿವರು ಎಲ್ಲಾ ಆಶಾ ಕಾರ್ಮಿಕರಿಗೆ 3000 ಮಾಸಿಕ ವೇತನವನ್ನು ರಾಜ್ಯ ನಿಧಿಯಿಂದ ನೀಡುವುದಾಗಿ ಖಾತ್ರಿಪಡಿಸಿದ್ದಾರೆ. ಇದಲ್ಲದೆ ಆಶಾ ಗಳು ಅವರ ಕಾರ್ಯಕ್ಷಮತೆ ಪ್ರೋತ್ಸಾಹಕಗಳ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್ ಎಂ) ನಿಧಿಯನ್ನು ಪಡೆಯಬಹುದು” ಎಂದು ವಿವರಿಸಿದರು.
ಸಚಿವ ರಮೇಶ್ ಕುಮಾರ್ ಮಾತನಾಡಿ “ಯಾವುದೇ ರಾಜ್ಯವು ಈ ರೀತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಂಬಳ ಒದಗಿಸುತ್ತಿಲ್ಲ.ತೆಲಂಗಾಣ ಸಹ ಆಶಾ ಕಾರ್ಯಕರ್ತೆಯರ ಕಾರ್ಯಕ್ಷಮತೆಯ ಆಧಾರದಲ್ಲಿ ಅವರಿಗೆ ಪ್ರೋತ್ಸಾಹಧನ ನೀಡುತ್ತಿದೆ. ಸಂಬಳದಲ್ಲಿ ಹೆಚ್ಚಳ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.
ಕಳೆದ ಎರಡು ದಿನಗಳ ಅವಧಿಯಲ್ಲಿ ಫ್ರೀಡಮ್ ಪಾರ್ಕ್ ನಲ್ಲಿ ಸ್ಥಿರ ಮಾಸಿಕ ವೇತನಕ್ಕಾಗಿ ಬೇಡಿಕೆ ಇಟ್ಟು ಸುಮಾರು 15,000 ಆಶಾ ಕಾರ್ಯಕರ್ತೆಯರು ತಮ್ಮ ಮಕ್ಕಳೊಂದಿಗೆ ಮಳೆ ಮತ್ತು ಬಿಸಿಲನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ತೊಡಗಿದ್ದರು ಮತ್ತಷ್ಟು ಓದು

ಬೆಂಗಳೂರಿನಲ್ಲಿ ಭಾರಿ ಮಳೆ: ನಾಲ್ವರ ಸಾವು

ಬೆಂಗಳೂರು: ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು  ಕಾರಿನ ಮೇಲೆ ಮರ ಬಿದ್ದ ಪರಿಣಾಮ ದಂಪತಿ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಕಾಲುವೆಯಲ್ಲಿ ಕೊಚ್ಚಿ ಹೋಗಿ ಒಬ್ಬ ಯುವಕ ಮೃತಪಟ್ಟಿದ್ದಾರೆ.
ಬೆಂಗಳೂರು ಮಿನರ್ವ ವೃತ್ತ ಸಮೀಪದ ಡಿಸ್ಪೆನ್ಸರಿ ರಸ್ತೆಯಲ್ಲಿ ಕಾರಿನ ಮೇಲೆ ನೀಲಗಿರಿ ಮರ ಬಿದ್ದಿದ್ದರಿಂದ, ಒಳಗಿದ್ದ  ಮೂವರು ಮೃಅತಪಟ್ಟಿದ್ದಾರೆ.
ಮೃತರನ್ನು ಸುಂಕದಕಟ್ಟೆಯ ರಮೇಶ್‌ (42), ಅವರ ಪತ್ನಿ ಭಾರತಿ (38) ಹಾಗೂ ಸಂಬಂಧಿ ಜಗದೀಶ್‌ (42) ಎಂದು ಗುರುತಿಸಲಾಗಿದೆ. ರಮೇಶ್‌ ಅವರ ಮಗ ಲೋಹಿತ್‌ (10) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರವನ್ನು ತೆರವುಗೊಳಿಸಿರುವ ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರು, ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತಪಟ್ಟ ರಮೇಶ್ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯೊಂದರಲ್ಲಿ ವ್ಯವಸ್ಥಾ‍ಪ‍ಕರಾಗಿದ್ದರು. ಅದೇ ಕಾರ್ಖಾನೆಯಲ್ಲಿ ಜಗದೀಶ್‌ ಟೈಲರ್‌ ಆಗಿದ್ದರು. ಭಾರತಿ ಗೃಹರಕ್ಷಕದಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕಲಾಸಿಪಾಳ್ಯ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ದುರಸ್ತಿಗಾಗಿ ಕಲಾಸಿಪಾಳ್ಯದ ಗ್ಯಾರೇಜ್‌ಗೆ ಬಂದಿದ್ದ ರಮೇಶ್ ರಾತ್ರಿ 7ರ ಸುಮಾರಿಗೆ ಕೆಲಸ ಮುಗಿಸಿಕೊಂಡು  ಮನೆಗೆ ಹೊರಟಿದ್ದರು. ಅದೇ ವೇಳೆ ಮಳೆ ಜೋರಾಗಿ ಬರುತ್ತಿದ್ದರಿಂದ ಮರದ ಕೆಳಗೆ ಕಾರು ನಿಲ್ಲಿಸಿದ್ದರು.
ಕೆಲ ನಿಮಿಷದಲ್ಲಿ ಮರವು ಕಾರಿನ ಮೇಲೆ ಉರುಳಿದೆ. ಕಾರು ಜಖಂ ಗೊಂಡು , ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಸಹಾಯಕ್ಕೆ ಬಂದ ಸ್ಥಳೀಯರು, ಆಸನದ ಕೆಳಗೆ ಸಿಲುಕಿದ್ದ ಲೋಹಿತ್‌ನನ್ನು ರಕ್ಷಿಸಿ ಹೊರಗೆ ಕರೆತಂದರು
ಇನ್ನು ಮಳೆಯ ಕಾರಣದಿಂದ  ಗಾಳಿ ಜೋರಾಗಿ ಬೀಸಿದ್ದರಿಂದ ಜೆ.ಪಿ.ನಗರದ ಎರಡು ಕಡೆಗಳಲ್ಲಿ ಮರಗಳು ಉರುಳಿಬಿದ್ದಿವೆ. ಶಿವಾನಂದ ವೃತ್ತದ ಕೆಳಸೇತುವೆಯಲ್ಲಿ ನೀರು ನಿಂತುಕೊಂಡು ರಾತ್ರಿ ಬಹುಹೊತ್ತಿನವರೆಗೆ ವಾಹನಗಳ ಸಂಚಾರ ಬಂದ್‌ ಆಯಿತು.
ಮೆಜೆಸ್ಟಿಕ್‌, ನೃಪತುಂಗ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಂಡುಬಂತು. ನಗರದಲ್ಲಿ ಸರಾಸರಿ 3 ಮಿ.ಮೀ ಮಳೆಯಾಗಿದೆ. ಸಂಪಂಗಿರಾಮನಗರ 17.5 ಮಿ.ಮೀ, ಆನೇಕಲ್‌ 11 ಮಿ.ಮೀ, ರಾಜಾಜಿನಗರ 19 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದರು ಮತ್ತಷ್ಟು ಓದು