ಬೆಂಗಳೂರು ಮೇಯರ್ ಚುನಾವಣೆ: ಜೆಡಿಎಸ್ ನಿರ್ಧಾರದತ್ತ ಕಾಂಗ್ರೆಸ್, ಬಿಜೆಪಿ ಚಿತ್ತ!

hd-new

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಗೆ ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ತನ್ನ ಹಳೇಯ ದೋಸ್ತಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮುಂದುವರಿಸುತ್ತದೆಯೋ ಅಥವಾ ಬೆಂಬಲ ವಾಪಸ್ ಪಡೆದುಕೊಳ್ಳುತ್ತದೆಯೋ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.ಎಲ್ಲರ ಕಣ್ಣು ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್,ಡಿ ಕುಮಾರಸ್ವಾಮಿ ಮೇಲಿದೆ. ಎಚ್ ಡಿಕೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರು ಕುತೂಹಲದಿಂದ ಕಾಯುತ್ತಿದ್ದಾರೆ.ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಆಧ್ಯಕ್ಷರ ಆಯ್ಕೆ ಸೆಪ್ಟಂಬರ್ 28 ರಂದು ನಡೆಯಲಿದೆ, ಈ ಬಾರಿ ಮೇಯರ್ ಹುದ್ದೆ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದ್ದು, ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು, ಮೇಯರ್ ಹುದ್ದೆ ಪಡೆಯಲು ಹವಣಿಸುತ್ತಿವೆ. ಆದರೆ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಪಕ್ಷ ಇನ್ನೂ ನಿರ್ಧರಿಸಿಲ್ಲ ಎಂದು ಜೆಡಿಎಸ್ ಶಾಸಕ ಶರವಣ ತಿಳಿಸಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶರವಣ, ಮೇಯರ್ ಚುನಾವಣೆಗೆ ಇನ್ನೂ ಸಮಯ ಇರುವುದರಿಂದ ಯಾವುದೇ ಆತುರವಿಲ್ಲ, ಬಿಬಿಎಂಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು 2 ಬಾರಿ ಕಾಂಗ್ರೆಸ್ ಪಕ್ಷವೇ ಮೇಯರ್ ಆಗಿದೆ. ಹಾಗಾಗಿ ಈ ಬಾರಿ ನಮಗೆ ಮೇಯರ್ ಪಟ್ಟ ನೀಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಬೆಂಬಲ ನೀಡಿದ ನಂತರ ಕಾಂಗ್ರೆಸ್ ನಮ್ಮನ್ನು ಮೂಲೆ ಗುಂಪು ಮಾಡುತ್ತದೆ ಎಂ0ದು ಆರೋಪಿಸಿದ್ದಾರೆ.ಜೆಡಿಎಸ್ ಅನ್ನು ಪ್ರತಿನಿಧಿಸುಪ ವಾರ್ಡ್ ಗಳ ಸದಸ್ಯರಿಗೆ ಅನುದಾನ ಹಂಚಿಕೆಯಲ್ಲಿ ತಾರಮತ್ಯ ಮಾಡಲಾಗುತ್ತದೆ, ಕಾಂಗ್ರೆಸ್ ಸದಸ್ಯರಿರುವ ವಾರ್ಡ್ ಗಳಿಗೆ ಹೆಚ್ಚಿನ ಅನುದಾನ ಹಣ ನೀಡಲಾಗುತ್ತದೆ.

ಸಮನ್ವಯ ಸಮಿತಿ ರಚಿಸಲಾಗಿದ್ದು, ಇದುವರೆಗೂ ಒಂದು ಸಭೆಯನ್ನು ಕೂಡ ನಡೆಸಿಲ್ಲ, ನಾನು ಸಭೆಯ ಸದಸ್ಯನಾಗಿದ್ದೇನೆ, ಆದರೆ ಯಾರಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನಸ್ಸಿಗೆ ಬಂದಂಥೆ ನಿರ್ಧಾರ ಕೈಗೊಳ್ಳುತ್ತಾರೆ, ಹೀಗಿರುವಾಗ ಅವರಿಗೆ ನಾವು ಏಕೆ ಬೆಂಬಲ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.ಮೈತ್ರಿ ಮುಂದುವರಿಸುವ ಬಗ್ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕುಮಾರಸ್ವಾಮಿ ಮನವೋಲಿಸಲು ಯತ್ನಿಸುತ್ತಿದ್ದಾರೆ. ಗುರುವಾರ ಕುಮಾರಸ್ವಾಮಿ, ಪರಮೇಶ್ವರ್ ಮತ್ತು ಸುರೇಶ್ ಹಾಗೂ ನಾನು ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಬೇಕಿತ್ತು, ಆದರೆ ಕುಮಾರ ಸ್ವಾಮಿ, ಅನಾರೋಗ್ಯದ ಕಾರಣ ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಜೆಡಿಎಸ್ ಗೆ ಮೇಯರ್ ಸ್ಥಾನ ನೀಡುವುದರ ಜೊತೆಗೆ 4 ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಟ್ಟಿದೆ. ಆದರೆ ಕಾಂಗ್ರೆಸ್ ಮುಖಂಡರು ಇದಕ್ಕೆ ಸಮ್ಮತಿಸಿಲ್ಲ, ಈ ಸಂಬಂಧ ಕುಮಾರ ಸ್ವಾಮಿ ಅವರನ್ನು ಪ್ರಶ್ನಿಸಿದರೇ, ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ ಮತ್ತಷ್ಟು ಓದು

ಕೃಷ್ಣಾನದಿ ದ್ವೀಪದಲ್ಲಿ ಸಿಲುಕಿದ ಮೂವರು ಕುರಿಗಾಹಿಗಳು: ರಕ್ಷಣೆಗಾಗಿ ಎನ್ ಡಿ ಆರ್ ಎಫ್ ಮೊರೆ

krishna-new

ಬೆಳಗಾವಿ: ಯಾದಗಿರಿ ಜಿಲ್ಲೆಯ ಕೃಷ್ಣಾನದಿ ದ್ವೀಪದಲ್ಲಿ ಕಳೆದ 4 ದಿನಗಳಿಂದ ಸಿಲುಕಿರುವ ಮೂವರು ಕುರಿಗಾಹಿಗಳನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಮನವಿ ಮಾಡಲಾಗಿದೆ. ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಮೇಲಿನಗಡ್ಡಿ ಗ್ರಾಮದ ಮೂರು ಕುರಿಗಾಹಿಗಳು ಮತ್ತು ಅವರ 80 ಕುರಿಗಳು ದ್ವೀಪದಲ್ಲೇ ಸಿಲುಕಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಸ್ಲೂಸ್ ಗೇಟ್ ಗಳನ್ನು ತೆರೆಯಲಾಗಿದೆ.

ಹೈದರಾಬಾದ್ ನಿಂದ ಆಗಮಿಸಿದ 22 ಸದಸ್ಯರ ತಂಡ ಸುರಪುರದ ಮೆಲಿನಗಡ್ಡಿ ದ್ವೀಪದಲ್ಲಿ ಸಿಲುಕಿರುವವರ ರಕ್ಷಣೆಗೆ ಗುರುವಾರ ಬೆಳಗ್ಗೆ ರಕ್ಷಣಾ ಕಾರ್ಯ ಆರಂಭಿಸಿದೆ. ಮೇಲಿನಗಡ್ಡಿ ದ್ವೀಪ ಯಾದಗಿರಿಯಿಂದ 120 ಕಿಮೀ ದೂರದಲ್ಲಿದೆ.ಕಳೆದ ನಾಲ್ಕು ದಿನಗಳಿಂದ ದ್ವೀಪದಲ್ಲಿ ಸಿಲುಕಿರುವ ಕುರಿಗಾಹಿಗಳು ಕುರಿಯ ಹಾಲನ್ನು ಕುಡಿದು ಜೀವಿಸುತ್ತಿದ್ದಾರೆ. ಬುಧವಾರ ಕೂಡ ರಕ್ಷಣಾ ಪಡೆ ದ್ವೀಪ ತಲುಪಲು ಸಾಧ್ಯವಾಗಲಿಲ್ಲ, ಜಲಾಶಯದ ಹೊರ ಹರಿವು ಹೆಚ್ಚಿದ್ದು, ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ ಮತ್ತಷ್ಟು ಓದು

ಪಾಕಿಸ್ತಾನದ ಮಹಿಳೆಗೆ ವೈದ್ಯಕೀಯ ವೀಸಾಕ್ಕೆ ನೆರವು ನೀಡಿದ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಕಿಸ್ತಾನ ಮಹಿಳೆಗೆ ಚಿಕಿತ್ಸೆಗೆ ವೀಸಾ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ತನಗೆ ವೈದ್ಯಕೀಯ ವೀಸಾ ಕೊಡಿಸುವಂತೆ ಪಾಕಿಸ್ತಾನದ ಮಹಿಳೆ ಫೈಜಾ ತನ್ವೀರ್ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ವಿಡಿಯೊವೊಂದನ್ನು ಕೂಡ ಟ್ವಿಟ್ಟರ್ ನಲ್ಲಿ ತಿಂಗಳ ಹಿಂದೆ ಅಪ್ ಲೋಡ್ ಮಾಡಿದ್ದರು.
ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ, ನಿಮಗೆ ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ವಾಗತ. ನಿಮ್ಮ ಚಿಕಿತ್ಸೆ ವೈದ್ಯಕೀಯ ವೀಸಾ ಕೊಡಿಸುತ್ತೇವೆ ಎಂದಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ  ತನ್ವೀರ್, ನೀವು ನನಗೆ ತಾಯಿಯಿದ್ದಂತೆ. ಭಾರತ 70ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ದಯಮಾಡಿ  ನನಗೆ ವೀಸಾ ಕೊಡಿಸಿ ಎಂದು ಕೇಳಿದ್ದರು.
ತನ್ವೀರ್ ಆಮ್ಲಬ್ಲಾಸ್ಟೊಮಾ ಎಂಬ ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ click here